Tuesday, January 12, 2010

ಆಸೆ


ಕವಿಯ ಭಾವನೆಗಳಿಗೆ ಸ್ಪೂರ್ತಿಯಾಗುವ ಆಸೆ
ಲಿಪಿಗಾರನ ಕೈಯಲಿ ಉಳಿಯಾಗುವ ಆಸೆ
ಚಿತ್ರಗಾರನ ಕೈಯಲಿ ಕುಂಚವಾಗುವ ಆಸೆ
ಲೇಖಕನ ಕೈಯಲಿ ಲೇಖನಿಯಗುವ ಆಸೆ
ಹಕ್ಕಿಗಳಿಗೆ ಮಡಿಲ ನೀಡುವ ಆಸೆ
ಜೀವಜಂತುಗಳಿಗೆ ಉಸಿರಾಗುವ ಆಸೆ
ಮಗುವಿನ ತುಟಿಯ ಮೇಲಿನ ನಗುವಾಗುವ ಆಸೆ
ಆಸೆ ಆಸೆ ನನ್ನದೆಂತಹ ಪರಿ-ಪರಿಯ ಆಸೆಯಲ್ಲವೇ

4 comments:

  1. ಈಗ ತಾನೇ ನನ್ನ ಆಸೆ ಪೋಸ್ಟ್ ಮಾಡಿದೆ. ಅಷ್ಟರಲ್ಲಾಗಲೇ‌ ನೀವೊಂದಿಷ್ಟು ಲಿಸ್ಟ್ ರೆಡಿ ಮಾಡಿದ್ದೀರ....
    ನಿಮ್ಮಾಸೆಗಳೂ‌ ಚೆನ್ನಾಗಿವೆ :)

    ReplyDelete
  2. ಆಸೆಗಳೂ ಚೆನ್ನಾಗಿವೆ,
    ಸುಂದರ ಸಾಲುಗಳು

    ReplyDelete
  3. ಹಾಯ್ ರೀ
    ನಿಮ್ಮ ಕವಿತೆ ಮುದ್ದಾಗಿದೆ.
    ಆದರೂ ನಿಮ್ಮ ಕವಿತ್ವ ಇನ್ನೂ ಪಕ್ವಗೋಳ್ಳಬೇಕು
    ಗಮನ ಹರಿಸಿ.
    ಸಂಕ್ರಾಂತಿಯ ಶುಭಾಶಯಗಳು
    ಕನಸು

    ReplyDelete
  4. ಮಗುವಿನ ನಗುವಾದರೇ ಎಲ್ಲಾ ಆಶೆ ಪೂರೈಸಿದ೦ತೆ.
    ಚೊಕ್ಕ ಕವನ

    ReplyDelete