ಸವಾಲುಗಳ ಸರಮಾಲೆಯ ಧರಿಸಿರುವವಳು
ಸವಾಲುಗಳ ಹಾಕುವಳು ಪಟ್ಟಭದ್ರ ಹಿತಾಸಕ್ತಿಗಳಿಗೆ
ವೈಚಾರಿಕತೆಗೆ ಹೊಸ ರೂಪವ ನಿದುವಳು
ತಾರ್ಕಿಕ ಸಿದ್ಧಾಂತಗಳ ಮೈಗೂದಿಸಿಕೊಳ್ಳುವಳು
ಸ್ವಯಮ್ವರಗಳ ಸಂತೆಗೆ ಬಲಿಯಾಗಳು
ಕುಯುಕ್ತಿಯ ಜೂಜಾಟಕೆ ಪಗಡೆಯಾಗಲಾರಲು
ಕ್ರೌರ್ಯದ ಕಾಮದ ಆಟಕೆ ಕುರಿಯಾಗಲಾರಳು
ಎಲ್ಲರಿಗೂ ಎಲ್ಲದಕೂ ಸರಿಗಟ್ಟಿ ನಿಲ್ಲುವಳು
ಈ ಆಧುನಿಕತೆಯ ಹೆಣ್ಣು
ಆಧುನಿಕ ಮಹಿಳೆಯ ಧೋರಣೆ ಏನು ಎ೦ಬುದರ ಬಗ್ಗೆ ಚೆ೦ದವಾಗಿ ಹೇಳಿದ್ದಿರಾ....
ReplyDeleteಮೇಡಂ,
ReplyDeleteಹೆಣ್ಣು ತೆರೆದುಕೊಳ್ಳಲಾರದ, ಹೇಳಿಕೊಳ್ಳಲಾರದ ತಾಕಲಾಟಗಳ ನಡುವೆಯೂ ಮೌನವಾಗಿರುತ್ತಾಳೆ.
ಪದ್ಯವು ಕಟು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ.
ಹೀಗೆ ಬರೆಯುತ್ತಿರಿ.
ಕಟು ವಾಸ್ತವ
ReplyDeleteಸುಂದರವಾಗಿದೆ