Monday, June 21, 2010

ಹೀಗೇಕೆ?


ಅರಿಯದೇನೆ ಸ್ನೇಹವಾಗಿ ಅರಿತೆವು ಇಬ್ಬರ ಕನಸುಗಳ-ನೋವುಗಳ-ನಲಿವುಗಳ,


ಪರಸ್ಪರ ಹಂಚಿಕೊಂಡೆವು ಎಡಬಿಡದೆ ದೈನಂದಿನ ವೈಪರಿತ್ಯಗಳ,


ಸಮಾಜ-ಸಂಬಧಿಕರು-ಮನೆಯವರು

ಮರುಮಾತಾಡಲಿಲ್ಲ ನಮ್ಮಿಬ್ಬರ ಸ್ನೇಹದ ಬಗ್ಗೆ,


ಜಾತಿ-ಕುಲ-ಗೋತ್ರಗಳೆಂದು ಅಡ್ಡಿಯಾಗಲಿಲ್ಲ


ನಮ್ಮಿಬ್ಬರ ಒಡನಾಟಕೆ, ಆತ್ಮೀಯವಾದ ಸಂಬಧಕೆ.



ಸ್ನೇಹ ಎಂಬ ಪವಿತ್ರ ಸಂಬಧ ಎಂದೂ


ಪ್ರೀತಿ ಎಂಬ ಅನುಭೂತಿಯಾಗಿ ಬದಲಾಯಿತೋ


ಭೂಮಿಯೊಳಗಿನ ಜ್ವಾಲಾಮುಖಿಯ ಕೊಪಾಗ್ನಿಯಂತೆ,


ಶಾಂತವಾದ ಸಮುದ್ರ ಎಲ್ಲೇ ಮೀರಿದಂತೆ


ಬದಲಾಯಿತು ಎಲ್ಲರ ಆವಾ-ಭಾವಗಳು,


ಪ್ರೀತಿಯೆಂದರೆ ಕ್ರೂರವೇ, ಕೊಮಲವೇ ಎಂಬ


ಯಕ್ಷಪ್ರಶ್ನೆ ಮನದಾಳದಲಿ ನನ್ನ ಪಿದಿಸುತಿದೆ


ಅಥವಾ


ಅರಿಯದವರ ಕಣ್ಣಿಗೆ, ಅರ್ಥಮಾದಿಕೊಲ್ಲದವರ ಮನಸ್ಸಿಗೆ ಸಿಕ್ಕಿ,


ಅರಳುವ ಮುನ್ನವೇ ಕಮರುವ ಕಮಲವೇ.



No comments:

Post a Comment